ಎಂದೋ ಒಂದು ದಿನ ಆಕಸ್ಮಿಕ ಪರಿಚಯ
ಆ ಪರಿಚಯಕ್ಕಾಗಿ ಒಂದು ಮುಗುಳುನಗೆ
ಯಾಕೆ ಆ ನಗು ನನ್ನ ಹೃದಯದಲ್ಲಿ
ಸ್ಥಿರವಾಯಿತು ಗೆಳೆಯಾ.....?
ಶುರುವಾಯಿತು ಭಾವನೆಗಳ ವಿನಿಮಯ
ಹೀಗೆಯೇ ಕಳೆಯಿತು ಬಹುಸಮಯ
ಮೂಡಿತು ಮನದಲ್ಲಿ ನವಿರಾದ ಭಾವನೆಗಳು
ಕಾರಣವೇನು ಗೆಳೆಯಾ.....?
ನಾನು-ನೀನು ಸಮಾನಾಂತರ ರೇಖೆಗಳು
ಎಂದೂ
ಜೀವನದಲ್ಲಿ ಸೇರಲಾರೆವು ಎಂದೆಂದೂ
ಇದನ್ನೆಲ್ಲ ಯೋಚಿಸಲೇ ಇಲ್ಲ ನಾವಿಬ್ಬರೂ
ಅಂದೂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ