ಪ್ರಕೃತಿ ಮಾತೆ ಸಹಿಸುತಿಹಳು
ಎಲ್ಲ ಕಷ್ಟಕೋಟಲೆ..
ನಮ್ಮ ಬಾಳು ನರಕ ಸದೃಶ
ಅವಳು ಸಿಡಿದಳೆಂದರೆ..
ಉಸಿರು ಕೊಡುವ ಹಸಿರಿಗೆ
ಕೊಡಲಿ ಏಟು ಕೊಡುವರು..
ಜೀವಜಲಕೆ ವಿಷವ ಬೆರೆಸಿ
ಸಾಧನೆಯೆಂದು ಮೆರೆವರು..
ವಿನಾಶದ ಅಂಚಲ್ಲಿದೆ
ಪ್ರಾಣಿ-ಪಕ್ಷಿ ಸಂಕುಲ..
ಆಕ್ರೋಶದಿ ಕೂಗುತಿವೆ
ನಮದೂ ಅಲ್ಲವೇ ಈ ನೆಲ??
ಸಹನಾಮೂರ್ತಿ, ಕ್ಷಮಯಾಧರಿತ್ರಿ
ಈ ವಸುಂಧರೆ...
ವಿಷವನ್ನುಂಡು ಅಮೃತವನೇ
ನೀಡುತಿಹಳು ಸುಮ್ಮನೆ..
ಸಮೀಪಿಸುತಿದೆ ಕೇಡುಗಾಲ
ಮನುಜಕುಲಕೂ ಖಂಡಿತ..
ಇದನರಿತು ಸಂರಕ್ಷಿಸಿದರೆ ಪ್ರಕೃತಿಯ
ಸುಖದ ಕಾಲ ನಿಶ್ಚಿತ.
ಅದ್ಭುವಾಗಿದೆ
ಪ್ರತ್ಯುತ್ತರಅಳಿಸಿಪ್ರಕೃತಿಯ ಸಿರಿಮುಡಿಗೆ ಕೊಡಲಿ ಹಾಕಿದ ಮನುಜ ಸ್ವಾರ್ಥದಲಿ ಮುಳುಗಿಹನು ಪೂರ ಪ್ರತಿಪತಿ ಭಿತ್ತಿಯಲ್ಲಿ ಬಿಡಿಸುವನು ಗಿಡಬಳ್ಳಿ ಚಿತ್ತಾರ ಮರೆತೇಬಿಟ್ಟಿಯನ್ನು ಮಣ್ಣ ಸೊಗಡ
ಪ್ರತ್ಯುತ್ತರಅಳಿಸಿ