ಮಾತೇ ಬಾರದ ನೀರಸ ಮೌನ
ಅತೀ ಬೇಸರವೆನಿಸಿದೆ ಜೀವನ ಯಾನ
ಭಾವ ಸರೋವರದ ಬಿರುಗಾಳಿಗೆ ಸಿಲುಕಿ
ಎತ್ತಲೋ ಸಾಗಿದೆ ಬದುಕಿನ ಪಯಣ...
ಕಾಣದ ಕೈಯ ಕೈವಾಡಕ್ಕೆ ಬದುಕಾಗಿದೆ ಶೂನ್ಯ
ಮರೆತ ಗುರಿಯಿಂದ ಎಲ್ಲವೂ ಕುರುಡು
ಮರೀಚಿಕೆಯ ಬೆನ್ನಟ್ಟಿ ನಾಗಾಲೋಟ
ಆಸೆ ಕನಸೆಲ್ಲವೂ ಬರೀ ಗಗನ ಕುಸುಮ...
ತಿರುಗಿ ನೋಡಿದರೆ ಭಯಹುಟ್ಟಿಸುವ ಕರಾಳ ಮುಖ
ದಿಕ್ಕೆಟ್ಟ ಕಂಗೆಟ್ಟ ಧೃತಿಗೆಟ್ಟ ಕಾಂತೀಹೀನ ಕರಾಳತೆಯ ಛಾಯೆ
ನಿರಾಸೆಯ ಮೃತ್ಯುಕೂಪದಲಿ ಬೆಂದ ಮನಸು
ತಾನೇ ಬಂಧಿಯಾಗಿದೆ ಖಿನ್ನತೆಯ ಭೂತಬಂಗಲೆಯಲಿ..
ಬೇಯುತಿದೆ ಜ್ವಾಲಾಮುಖಿಯ ಜ್ವಾಲೆಯಲಿ
ಮುಳುಗಿದೆ ಸೂತಕದಂತ ಯಾತನೆಯಲಿ
ಬಿಡುಗಡೆ ದೊರೆತರೂ ಧಿಕ್ಕರಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ