ಮಂಗಳವಾರ, ಜೂನ್ 18, 2019

ರೈತ

ರೈತ..
ಮುಂಗಾರಿನ ಮೋಡ, ತಂಗಾಳಿ
ತುಂತುರು ಮಳೆಯಲಿ ನವಿಲ ನರ್ತನ
ಹಸಿರು ಸಿರಿಯಲಿ ಉಳುವ
ಯೋಗಿಯ ಕಾಯಕ ನಿತ್ಯ ನೂತನ

ನೇಗಿಲು ನೊಗವ ಹಿಡಿದು
ಎತ್ತಿನ ಜೊತೆಗೆ ಮಾಡುವ ಉಳುಮೆ
ಕೆಸರ ಗದ್ದೆಯಲಿ ಬೀಜ ಬಿತ್ತುವ
ಮಳೆ ಗಾಳಿಯನು ಲೆಕ್ಕಿಸದೆ

ಜಗಕೆ ಅನ್ನ ನೀಡುವ ದೇವದೂತ
ಕಾಯಕವೇ ಇವನಿಗೆ ಕೈಲಾಸ
ನೋವ ನುಂಗಿ ನಗುನಗುತಲೇ
ಬೆವರ ಹರಿಸಿ ಮಾಡುವನು ಕೆಲಸ

ಪ್ರಕೃತಿಯೇ ಮುನಿದರೇ ಇವನ
ಗೋಳ ನೋಡುವುದೇ ದುಸ್ತರ
ದೊರೆಯದೂ ಯಾರಿಂದಲೂ
ರೈತನಿಗೆ ಸಹಾಯ ಸಹಕಾರ

ಪ್ರಾಣಿ ಪಕ್ಷಿಗಳಿಗೂ ಇವನು
ಊಟ ಕೊಡುವ ಮಿತ್ರ
ಜೀವ ಸಂಕುಲದಲಿ
ದೊಡ್ಡದಿದೇ ಇವನ ಪಾತ್ರ

      ಪಂಚಮ ವೇದಾ...

ಶನಿವಾರ, ಜೂನ್ 15, 2019

ಹರೆಯ

ಹುಡುಕಾಟ ಹುಡುಗಾಟದ ವಯಸು..
ಎಲ್ಲೆಲ್ಲೂ ಜಾರುವ ಹುಚ್ಚು ಮನಸು..
ಕಾಣುತಿದೆ ಎಲ್ಲವೂ ಸೊಗಸು..
ಮೂಡುತಿದೆ ಬಣ್ಣ ಬಣ್ಣದ ಕನಸು..

ಸರಿಯಾಗಿ ನಡೆದರೂ ತಪ್ಪುತಿದೆ ದಾರಿ..
ಮನಸು ಜಾರಿದೆ  ಸಂಯಮ ಮೀರಿ
ಆಗಿದೆ ವೇಗದ ಮಿತಿ ಮೀರಿದ ಸಂಚಾರಿ..
ಅರಿಯದಾಗುತಿದೆ ಪ್ರಾಯದ ಪಿತೂರಿ..

ಜೀವನವೊಂದು ಕತ್ತಿಯ ಅಲಗು..
ಎಚ್ಚರ ತಪ್ಪಿದರೇ ಬರೀ ಕೊರಗು..
ಸರಿಯಾಗಿ ನಡೆದರೆ ಮೆರಗು..
ಇದೇ ಎಚ್ಚರಿಕೆಯ ಕೂಗು..

ಜೀವನದಿ ಇದೆ ಬಹಳ ಸಮಯ..
ಛಲದ ಹೋರಾಡಿಕ್ಕಿದೆ ಜಯ..
ದೊರೆವುದು ದೈವದ ಅಭಯ..
ಪ್ರತಿಜ್ಞೆಗೆ ಚಾಚು ಮುಂದೆ ಕೈಯ..

ಶುಕ್ರವಾರ, ಜೂನ್ 14, 2019

ಕೊಲೆಗಾರ

ನನ್ನ ಪ್ರೇಮದ ಪರಿಧಿಯೊಳು ಬಂದು ಬಾರದ ಹಾಗೇ
ಪ್ರೀತಿಯ ನಿರಾಕರಿಸಿ ದೂರಾದೆಯಾ??

ಮನದ ಮಾತನೂ ದೂರತಳ್ಳಿ ನನಗೆ
ಸಲ್ಲದ ಕಾರಣದ ನೀಡಿ ದೂರಾದೆಯಾ??

ಸವಿ ಸವಿ ನೆನಪುಗಳಿಗೆ ಮುಳ್ಳಿನ ಬೇಲಿಯ ಕಟ್ಟಿ
ಹಿಂದಿರುಗಿ ನೋಡದೇ ದೂರಾದೆಯಾ??

ಮನದ ಪರದೆಯ ಮೇಲೆ ನೀನೇ ರಚಿಸಿದ ಬಣ್ಣದ
ಚಿತ್ತಾರವ ಕಪ್ಪು ಬಿಳುಪಾಗಿಸಿ ದೂರಾದೆಯಾ??

ಭಾವ ತರಂಗದ ಮಧ್ಯದಿ ಅರಳಿದ ಮೋಹಕ
ಪುಷ್ಪವ ಹೊಸಕಿ ನೀ ದೂರಾದೆಯಾ??

ಪ್ರೀತಿಯೆಂಬ ನವಿರಾದ ಭಾವನೆಯನು ಕೊಂದ
ಕೊಲೆಗಾರನಾಗಿ ನನ್ನಿಂದ ದೂರಾದೆಯಾ??