ಮಂಗಳವಾರ, ಜೂನ್ 18, 2019

ರೈತ

ರೈತ..
ಮುಂಗಾರಿನ ಮೋಡ, ತಂಗಾಳಿ
ತುಂತುರು ಮಳೆಯಲಿ ನವಿಲ ನರ್ತನ
ಹಸಿರು ಸಿರಿಯಲಿ ಉಳುವ
ಯೋಗಿಯ ಕಾಯಕ ನಿತ್ಯ ನೂತನ

ನೇಗಿಲು ನೊಗವ ಹಿಡಿದು
ಎತ್ತಿನ ಜೊತೆಗೆ ಮಾಡುವ ಉಳುಮೆ
ಕೆಸರ ಗದ್ದೆಯಲಿ ಬೀಜ ಬಿತ್ತುವ
ಮಳೆ ಗಾಳಿಯನು ಲೆಕ್ಕಿಸದೆ

ಜಗಕೆ ಅನ್ನ ನೀಡುವ ದೇವದೂತ
ಕಾಯಕವೇ ಇವನಿಗೆ ಕೈಲಾಸ
ನೋವ ನುಂಗಿ ನಗುನಗುತಲೇ
ಬೆವರ ಹರಿಸಿ ಮಾಡುವನು ಕೆಲಸ

ಪ್ರಕೃತಿಯೇ ಮುನಿದರೇ ಇವನ
ಗೋಳ ನೋಡುವುದೇ ದುಸ್ತರ
ದೊರೆಯದೂ ಯಾರಿಂದಲೂ
ರೈತನಿಗೆ ಸಹಾಯ ಸಹಕಾರ

ಪ್ರಾಣಿ ಪಕ್ಷಿಗಳಿಗೂ ಇವನು
ಊಟ ಕೊಡುವ ಮಿತ್ರ
ಜೀವ ಸಂಕುಲದಲಿ
ದೊಡ್ಡದಿದೇ ಇವನ ಪಾತ್ರ

      ಪಂಚಮ ವೇದಾ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ