ನನ್ನ ಪ್ರೇಮದ ಪರಿಧಿಯೊಳು ಬಂದು ಬಾರದ ಹಾಗೇ
ಪ್ರೀತಿಯ ನಿರಾಕರಿಸಿ ದೂರಾದೆಯಾ??
ಮನದ ಮಾತನೂ ದೂರತಳ್ಳಿ ನನಗೆ
ಸಲ್ಲದ ಕಾರಣದ ನೀಡಿ ದೂರಾದೆಯಾ??
ಸವಿ ಸವಿ ನೆನಪುಗಳಿಗೆ ಮುಳ್ಳಿನ ಬೇಲಿಯ ಕಟ್ಟಿ
ಹಿಂದಿರುಗಿ ನೋಡದೇ ದೂರಾದೆಯಾ??
ಮನದ ಪರದೆಯ ಮೇಲೆ ನೀನೇ ರಚಿಸಿದ ಬಣ್ಣದ
ಚಿತ್ತಾರವ ಕಪ್ಪು ಬಿಳುಪಾಗಿಸಿ ದೂರಾದೆಯಾ??
ಭಾವ ತರಂಗದ ಮಧ್ಯದಿ ಅರಳಿದ ಮೋಹಕ
ಪುಷ್ಪವ ಹೊಸಕಿ ನೀ ದೂರಾದೆಯಾ??
ಪ್ರೀತಿಯೆಂಬ ನವಿರಾದ ಭಾವನೆಯನು ಕೊಂದ
ಕೊಲೆಗಾರನಾಗಿ ನನ್ನಿಂದ ದೂರಾದೆಯಾ??
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ