ಸೋಮವಾರ, ನವೆಂಬರ್ 4, 2019

ಜಂಗಮ ವಾಣಿ


ಎಲ್ಲರ ಕೈಯಲ್ಲೂ ಇದೆ ಜಂಗಮ ವಾಣಿ
ಇದು ಎಲ್ಲರ ಮನದ ಮಹಾರಾಣಿ...

ವಾಟ್ಸ್ ಆಪ್, ಫೇಸ್ಬುಕ್ ಕೂಡ ಇದೆ ಇಲ್ಲಿ!!
ಇಂತಹ ಮನರಂಜನೆಯ ತಾಣ ಇನ್ನೆಲ್ಲಿ??

ಕ್ಷಣ ಮಾತ್ರದಲೇ ರವಾನೆ ಸಂದೇಶ
ಈಗ ಬರುವುದು ಇದರಲೇ ಆದೇಶ!!

ತೆಗೆಯಬಹುದು ಬಣ್ಣಬಣ್ಣದ ಪಟ
ಆಡಬಹುದು ಬಗೆಬಗೆಯ ಆಟ..

ದಾರಿಯ ತೋರುವ ಜೊತೆಗಾರ ಇದು
ಮಾಹಿತಿ ನೀಡುವ ಗುರುವೂ ಇದು..

ನೀರೆ-ತರುಣರ ಮನವನೂ ಕದ್ದಿಹುದು
ಬಾಲರಾದಿಯಾಗಿ ವೃದ್ಧರ ಮನ ಗೆದ್ದಿಹುದು..

ಇತಿಯ ಜೊತೆಗೆ ಮಿತಿಯೂ ಉಂಟು
ಬಗೆಬಗೆಯ ಅಪಾಯಗಳೂ ಉಂಟೂ..

ಅತಿಯಾದರೇ ಅಮೃತವೂ ಕೂಡ ವಿಷವೇ
ಅತಿಯಾಗಿ ಬಳಸಿದರೆ  ಇದರ ಕೋಲಾಹಲವೇ

ಎಲ್ಲೆಲ್ಲೂ ಕೇಳಿಬರುತಿದೆ ಸೈಬರ್ ಕ್ರೈಂ ಕಥೆ
ದಾರಿ ತಪ್ಪಿದ ಮಕ್ಕಳ ಪಾಲಕರ ವ್ಯಥೆ..

ಇತಿಮಿತಿಯಲಿರಲಿ ಮೊಬೈಲ್ ನ ಬಳಕೆ
ಎಲ್ಲರಿಗೂ ಸವಿನಯವಾದ ಕೋರಿಕೆ...

                ಪಂಚಮ ವೇದಾ..

ಮಂಗಳವಾರ, ಜೂನ್ 18, 2019

ರೈತ

ರೈತ..
ಮುಂಗಾರಿನ ಮೋಡ, ತಂಗಾಳಿ
ತುಂತುರು ಮಳೆಯಲಿ ನವಿಲ ನರ್ತನ
ಹಸಿರು ಸಿರಿಯಲಿ ಉಳುವ
ಯೋಗಿಯ ಕಾಯಕ ನಿತ್ಯ ನೂತನ

ನೇಗಿಲು ನೊಗವ ಹಿಡಿದು
ಎತ್ತಿನ ಜೊತೆಗೆ ಮಾಡುವ ಉಳುಮೆ
ಕೆಸರ ಗದ್ದೆಯಲಿ ಬೀಜ ಬಿತ್ತುವ
ಮಳೆ ಗಾಳಿಯನು ಲೆಕ್ಕಿಸದೆ

ಜಗಕೆ ಅನ್ನ ನೀಡುವ ದೇವದೂತ
ಕಾಯಕವೇ ಇವನಿಗೆ ಕೈಲಾಸ
ನೋವ ನುಂಗಿ ನಗುನಗುತಲೇ
ಬೆವರ ಹರಿಸಿ ಮಾಡುವನು ಕೆಲಸ

ಪ್ರಕೃತಿಯೇ ಮುನಿದರೇ ಇವನ
ಗೋಳ ನೋಡುವುದೇ ದುಸ್ತರ
ದೊರೆಯದೂ ಯಾರಿಂದಲೂ
ರೈತನಿಗೆ ಸಹಾಯ ಸಹಕಾರ

ಪ್ರಾಣಿ ಪಕ್ಷಿಗಳಿಗೂ ಇವನು
ಊಟ ಕೊಡುವ ಮಿತ್ರ
ಜೀವ ಸಂಕುಲದಲಿ
ದೊಡ್ಡದಿದೇ ಇವನ ಪಾತ್ರ

      ಪಂಚಮ ವೇದಾ...

ಶನಿವಾರ, ಜೂನ್ 15, 2019

ಹರೆಯ

ಹುಡುಕಾಟ ಹುಡುಗಾಟದ ವಯಸು..
ಎಲ್ಲೆಲ್ಲೂ ಜಾರುವ ಹುಚ್ಚು ಮನಸು..
ಕಾಣುತಿದೆ ಎಲ್ಲವೂ ಸೊಗಸು..
ಮೂಡುತಿದೆ ಬಣ್ಣ ಬಣ್ಣದ ಕನಸು..

ಸರಿಯಾಗಿ ನಡೆದರೂ ತಪ್ಪುತಿದೆ ದಾರಿ..
ಮನಸು ಜಾರಿದೆ  ಸಂಯಮ ಮೀರಿ
ಆಗಿದೆ ವೇಗದ ಮಿತಿ ಮೀರಿದ ಸಂಚಾರಿ..
ಅರಿಯದಾಗುತಿದೆ ಪ್ರಾಯದ ಪಿತೂರಿ..

ಜೀವನವೊಂದು ಕತ್ತಿಯ ಅಲಗು..
ಎಚ್ಚರ ತಪ್ಪಿದರೇ ಬರೀ ಕೊರಗು..
ಸರಿಯಾಗಿ ನಡೆದರೆ ಮೆರಗು..
ಇದೇ ಎಚ್ಚರಿಕೆಯ ಕೂಗು..

ಜೀವನದಿ ಇದೆ ಬಹಳ ಸಮಯ..
ಛಲದ ಹೋರಾಡಿಕ್ಕಿದೆ ಜಯ..
ದೊರೆವುದು ದೈವದ ಅಭಯ..
ಪ್ರತಿಜ್ಞೆಗೆ ಚಾಚು ಮುಂದೆ ಕೈಯ..

ಶುಕ್ರವಾರ, ಜೂನ್ 14, 2019

ಕೊಲೆಗಾರ

ನನ್ನ ಪ್ರೇಮದ ಪರಿಧಿಯೊಳು ಬಂದು ಬಾರದ ಹಾಗೇ
ಪ್ರೀತಿಯ ನಿರಾಕರಿಸಿ ದೂರಾದೆಯಾ??

ಮನದ ಮಾತನೂ ದೂರತಳ್ಳಿ ನನಗೆ
ಸಲ್ಲದ ಕಾರಣದ ನೀಡಿ ದೂರಾದೆಯಾ??

ಸವಿ ಸವಿ ನೆನಪುಗಳಿಗೆ ಮುಳ್ಳಿನ ಬೇಲಿಯ ಕಟ್ಟಿ
ಹಿಂದಿರುಗಿ ನೋಡದೇ ದೂರಾದೆಯಾ??

ಮನದ ಪರದೆಯ ಮೇಲೆ ನೀನೇ ರಚಿಸಿದ ಬಣ್ಣದ
ಚಿತ್ತಾರವ ಕಪ್ಪು ಬಿಳುಪಾಗಿಸಿ ದೂರಾದೆಯಾ??

ಭಾವ ತರಂಗದ ಮಧ್ಯದಿ ಅರಳಿದ ಮೋಹಕ
ಪುಷ್ಪವ ಹೊಸಕಿ ನೀ ದೂರಾದೆಯಾ??

ಪ್ರೀತಿಯೆಂಬ ನವಿರಾದ ಭಾವನೆಯನು ಕೊಂದ
ಕೊಲೆಗಾರನಾಗಿ ನನ್ನಿಂದ ದೂರಾದೆಯಾ??

ಮಂಗಳವಾರ, ಮೇ 28, 2019

ಪ್ರಮಾಣ

ಪ್ರತಿಜ್ಞೆ..

ಕಯ್ಯ ಮೇಲೆ ಕೈ ಇರಿಸಿ
ನೀಡು ಪ್ರಮಾಣವ ಮಗು
ಆದರ್ಶ ನಾಗರೀಕನಾಗಿ
ಬಾಳುವುನೆಂದು...

ಅನ್ಯಾಯದ ವಿರುದ್ಧ
ಸಿಡಿದೇಳು ಮಗು
ವಂಚನೆಯ ಮಾಡು
ಗಡೀಪಾರು...

ಬಡವರ ಕಂಬನಿ ಒರೆಸಿ
ನಗಿಸು ನೀನು ಮಗು
ಸಹಾಯ ಹಸ್ತ ಇರಲಿ
ಅಸಹಾಯಕರ ಮೇಲೆ...

ಸಮಾಜ ಸುಧಾರಣೆಯ
ಗುರಿಕಾರನಾಗು ಮಗು
ಭ್ರಷ್ಟರ ಸೆದೆಬಡಿವ
ನಾಯಕನಾಗು...

ಮಾನವೀಯ ಮೌಲ್ಯಗಳ
ಮರೆಯದಿರು ಮಗು
ಹಸನಾಗಿಸಲು ಮಾಡು
ಇಂದೇ ಭೀಷ್ಮ ಪ್ರತಿಜ್ಞೆ...
 
       ಪಂಚಮ ವೇದಾ....

ಶುಕ್ರವಾರ, ಫೆಬ್ರವರಿ 22, 2019

ಸೌಂದರ್ಯ ಲಹರಿ

ಭೂರಮೆಯ ಸಿಂಗಾರ
ಹಸಿರು ವನ ಬಂಗಾರ
ಮಳೆಹನಿಯ ಪನ್ನೀರ
ರವಿ ಬೆಳಕೆ ಸಿಂಧೂರ

ಎಲೆಯೆಲೆಯಲೂ ಸೊಬಗು
ಮಗುವಿನ ನಗುವಿನ ಬೆಡಗು
ಸುತ್ತಲೂ ಚೆಲ್ಲಿದೆ ಬೆಳ್ಳಿ ಬೆಳಗು
ಮುತ್ತಿನಂತ ಹನಿಯ ಮೆರಗು

ಮಳೆ ಸುರಿಯೇ ಪಟಪಟ
ಮನಕಾನಂದ ಬಾಲೆಯಾಟ
ನೀರೊಡನೆ ಚೆಲ್ಲಾಟ
ಹಸಿರೊಡನೆ ತುಂಟಾಟ

ಕತ್ತಲಾಗುವ ಮೊದಲು
ಸೇರು ಅಮ್ಮನ ಮಡಿಲು
ಅದು ಪ್ರೀತಿಯ ಕಡಲು
ಮಮತೆ ತುಂಬಿದ ಒಡಲು

               ಪಂಚಮ ವೇದಾ...

ತಿರುವು

ಬಾಳ ಪುಟದಲಿ ತಿರುಗಳು ಹತ್ತಾರು
ನಡೆವ ದಾರಿಯಲ್ಲಿ ತಿರುವು ನೂರಾರು
ಜೀವನದ ತುಂಬಾ ನೆನಪಿನ ಕಾರುಬಾರು
ಬದುಕಿಗಾಗಿ ಸುತ್ತಬೇಕು ಊರೂರು

ಹುಡುಕಬೇಕಾಗಿದೆ ನೆಮ್ಮದಿಯ ಸೂರು
ಅದೆಲ್ಲಿದೆಯೋ ಸೊಬಗಿನ ತವರು
ಕೂಡಿಸಬೇಕಾಗಿದೆ ಕನಸುಗಳು ಚೂರು
ತೊಡಕುಗಳಿವೆ ಹತ್ತು ಹಲವಾರು

ಸಿಗುತಿಲ್ಲ ಅರಸಿದರೂ ಹನಿ ನೀರು
ಹರಡಿದೆ ಎಲ್ಲೆಲ್ಲೂ ಬೇಸರದ  ಬೇರು
ಕಮರುತಿದೆ ಇಂದು ಸ್ನೇಹದ ಚಿಗುರು
ದೂರಾಗಿದೆ ಭಾವಗಳ  ನವಿರು

ಬರಲಿ ಬೇಗ ಸಮಾಧಾನದ ನಿಟ್ಟುಸಿರು
ಬಾಳ ತುಂಬೆಲ್ಲ ತುಂಬಲಿ ಹಸಿರು
ಕರಗಿ ಹೋಗಲಿ ತುಂಬಿರು ಕೆಸರು
ಅಂತ್ಯಗೊಳ್ಳಲಿ ಬದುಕಿನೆಲ್ಲ ತಕರಾರು
    
                     ಪಂಚಮ ವೇದಾ....