ಸೋಮವಾರ, ಸೆಪ್ಟೆಂಬರ್ 28, 2020

ಆಸೆ

ಆಸೆ
ಬಾಳ ಕಡಲಲಿ ತೇಲಿ ಮೀಯುವ ಅರಸಂಚೆಯಾಗುವಾಸೆ
ಭುವಿಯ ಮೆರಗ ಹೆಚ್ಚಿಸುವ
ಹಸಿರ ಹೊದಿಕೆಯಾಗುವಾಸೆ

ಜುಳು ಜುಳು ಹರಿವ ನೀರಲಿ
ಮೀನಾಗಿ ಈಜುವಾಸೆ
ಬಾನ ರವಿಯ ಹೊಂಗಿರಣದಲಿ
ಸ್ಪುರಣ ಕಾಂತಿಯಾಗುವಾಸೆ

ಹಸುಕಂದನ ತುಟಿಯ ಮೇಲಿನ
ಕಿರು ನಗುವಾಗುವಾಸೆ
ಹಸಿರು ಚಿಗುರಿಲೆಯ ಮೇಲಿನ
ಮುತ್ತಿನ ಹನಿಯಾಗುವಾಸೆ

ಕಂಗೊಳಿಸುವ ತರುಲತೆಯಲಿ
ಸೌಗಂಧಿಕ ಪುಷ್ಪವಾಗುವಾಸೆ
ಬಾನೆತ್ತರಕೆ ಹಾರಿ ಕ್ಷಿತಿಜವದಲಿ
ಸೇರಿ ಬಣ್ಣದ ಹಕ್ಕಿಯಾಗುವಾಸೆ

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ