ನುಡಿ-ನಮನ
ಕೆಚ್ಚೆದೆಯ ಯೋಧರಿಗೆ
ಎದೆಯಾಳದಿಂದ ನಮನಾ
ಸಮರದ ಕಲಿಗಳಿಗಿದೋ
ಅರ್ಪಿಸುವೆವು ವಂದನಾ...
ಪ್ರಾಣವನೆ ಪಣಕಿಟ್ಟು
ದೇಶವನು ಕಾಯುವರು
ಜನ್ಮಭೂಮಿ ರಕ್ಷಣೆಗೆ
ಕುಟುಂಬವನೇ ತೊರೆದರು...
ನಮ್ಮ ನೆಮ್ಮದಿಯ ಹೊಣೆಯ
ತಮ್ಮ ಹೆಗಲ ಮೇಲೆ ಹೊತ್ತರು
ಶತ್ರುವಿನೊಡನೆ ಸೆಣೆಸಾಡಿ
ಜಯಿಸಿ ಹರಿಸಿ ತಮ್ಮ ನೆತ್ತರು...
ನಮ್ಮ ಭರತ ಭೂಮಿಯ
ಹಮ್ಮೆಯ ವೀರ ಪುತ್ರರು
ಕಾಡು-ಮೇಡು ಲೆಕ್ಕಿಸದೇ
ಹೋರಾಟಕೆ ನಿಂತರು...
ಎಂದೆಂದಿಗೂ ಅಮರವಾಗಿದೆ
ಅವರ ತ್ಯಾಗ ಬಲಿದಾನವು
ಕೆಚ್ಚೆದೆಯ ವೀರರ ಶೌರ್ಯ
ಮಾತೃ ಭೂಮಿಗೆ ವರದಾನವು..
ಕಾರ್ಗಿಲ್ ವಿಜಯ ದಿವಸ
ಹೆಮ್ಮೆಯಿಂದ ಆಚರಿಸುವ
ಹುತಾತ್ಮ ಯೋಧರನು
ಗೌರವದಿ ಸಂಸ್ಮರಿಸುವ...
ಹೃದಯದಿಂದ ಹೊಮ್ಮಲಿ
ವೀರರಿಗೆ ಭಾವಾಂಜಲಿ
ಕರಮುಗಿದು ಶಿರಬಾಗಿ
ಸಮರ್ಪಿಸುವ ಶೃದ್ಧಾಂಜಲಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ