ಮಾರ್ಗದರ್ಶನ ನೀಡುವವರು
ಇಲ್ಲದಿದ್ದರೇನು ತೊಂದರೆ
ಹೊಸ ಮಾರ್ಗವನೇ ಸೃಷ್ಟಿಸುವ
ಧೈರ್ಯ, ಛಲವು ನಿನ್ನಲಿ ಇದ್ದರೆ
ಜಗವೇ ಬರುವುದು ನೀ
ಸೃಷ್ಟಿಸಿದ ಮಾರ್ಗದಲಿ ಎಂದು
ಸ್ವಾಮಿ ವಿವೇಕಾನಂದರ
ನುಡಿಯಿದು ಸತ್ಯವು ಎಂದೆಂದೂ
ಆತ್ಮಸ್ಥೈರ್ಯದ ಮುಂದೆ
ಎಲ್ಲ ಕಷ್ಟಗಳು ಸೊನ್ನೆ
ಮರೆತು ಬಿಡು ಸೋಲಿನ
ಅವಮಾನಗಳ ನಿನ್ನೆ
ಮುಂದಿರುವ ಗುರಿಯೆಡೆಗೆ
ಸಾಗು ನೀ ಎಡೆಬಿಡದೆ
ಮನೋಬಲವು ಇರಲಿ
ಓಡು ನೀ ಎದೆಗುಂದದೆ
ಜೊತೆಯಿರಲಿ ಎಂದೂ
ಸತ್ಯ, ಮಾನವೀಯತೆ
ಬದುಕಾಗಲಿ ನಿತ್ಯವೂ
ವಿಜಯದ ಸ್ಪೂರ್ತಿಗೀತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ