ಭಾನುವಾರ, ನವೆಂಬರ್ 29, 2020

ಸೂರ್ಯಾಸ್ತಮಾನ


ನಾ ಕಂಡ ಇಳೆಯ ಸಂಜೆಯು
ಸ್ವರ್ಗ ಮೀರಿಸುವ ಸೊಬಗು
ಬಾನಿಂದ ಜಾರುತಿರುವ
ಸೂರ್ಯನ ಬಣ್ಣದ ಮೆರಗು

ಗೂಡು ಸೇರುವ ತವಕದಿ
ಹಕ್ಕಿಗಳ ಚಿಲಿಪಿಲಿ ಉಲಿಯು
ಬಾನಲಿ ಬಣ್ಣಗಳ ಚಿತ್ತಾರ
ಇದು ರವಿಯ ಕಲೆಯು

ಸೂರ್ಯಾಸ್ತಮಾನದಲಿ
ದೈವದ ಸೃಷ್ಟಿಗೆ ಇಲ್ಲ ಸಾಟಿಯು
ಸತ್ತಲೂ ಮನ ಸೆಳೆಯುವ
ಹಸಿರ ಸೊಬಗಿನ ಸಿರಿಯು

ಪದಗಳಿಗೆ ನಿಲುಕದಿಹ
ಸೊಬಗಿನಾ ಜಾಲವು
ಗಿರಿಯ ನಡುವೆ ರವಿಯು
ನಯನ ಮನೋಹರವು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ