ಪ್ರೀತಿ
ಚುಮು ಚುಮು ಚಳಿಯಲಿ
ಸೂರ್ಯನ ಎಳೆಬಿಸಿಲ ಸ್ಪರ್ಶದಂತೆ
ಹಿತವೆನಿಸುವುದು ಈ ಪ್ರೀತಿ..
ಸುಡುಬಿಸಿಲಿನಲ್ಲಿ ನಡೆವಾಗ
ಆಸರೆಯಾಗುವ ಹಸಿರು
ಗಿಡದ ನೆರಳಂತೆ ಪ್ರೀತಿ...
ಪ್ರತಿ ಹೆಜ್ಜೆಯ ಗೆಜ್ಜೆಯ
ದನಿಯಲ್ಲಿ ಬೆರೆತುಹೋದ
ಇಂಪಾದ ಸ್ವರ ಪ್ರೀತಿ..
ನನ್ನ ಪ್ರತಿ ಕಣ್ಣೀರಿನ ಹನಿ,
ನಸುನಗೆಯಲ್ಲೂ ಇಣುಕುವ
ಬೆಚ್ಚನೆಯ ಭಾವ ಈ ಪ್ರೀತಿ...
ಉಸಿರಾಡುವ ಗಾಳಿಯಲ್ಲಿ
ಬೆರೆತು ಉಸಿರಾಗಿರುವ
ಜೀವದ ಜೀವ ಪ್ರೀತಿ...
ತನುವಿಗೆ ತಂಪು ನೀಡುವ
ಮನಕೆ ಚೈತನ್ಯ ಕೊಡುವ
ತುಂತುರು ಮಳೆಹನಿ ಪ್ರೀತಿ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ