ಸೋಮವಾರ, ಅಕ್ಟೋಬರ್ 5, 2020

ಸೊಬಗಿನ ತವರು



ಹಸಿರು ಸೊಬಗಿನ ಸಿರಿಯ
ತೆಂಗು ಅಡಿಕೆಯ ಬೆಳೆಯ
ನಡುವಲಿಹುದು ನಮ್ಮೂರು

ಜುಳು ಜುಳು ಹರಿವ ನದಿಯ
ಹಸಿರು ದಿಬ್ಬದ ಕಣಿವೆಯ
ಬದಿಯಲಿಹುದು ನಮ್ಮೂರು

ನವಿಲಿನ ನರ್ತನದ ಸೊಗಡು
ಕೋಗಿಲೆಯ ಇಂಪಾದ ಹಾಡು
ತುಂಬಿರುವ ನಮ್ಮೂರು

ಸುಗುಣ ಸಂಸ್ಕೃತಿಯ ತವರು
ಸುಸಂಸ್ಕೃತರು ತುಂಬಿದ ಊರು
ಪುಣ್ಯಭೂಮಿಯು ನಮ್ಮೂರು

ಶಾಲ್ಮಲೆಯು ಹರಿಯುವಳು ಇಲ್ಲಿ
ಶಿವಗಂಗೆ ಜಲಪಾತ ಧುಮ್ಮಿಕ್ಕಿ ಚೆಲ್ಲಿ
ಕೈ ಬೀಸಿ ಕರೆಯುವ ನಮ್ಮೂರು






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ