ಭಾನುವಾರ, ಅಕ್ಟೋಬರ್ 4, 2020

ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ
ಜನಸಂಖ್ಯೆ ಕೋಟಿ ಕೋಟಿ
ಏರುತಿಹುದು ಮಿತಿ ದಾಟಿ
ಎಲ್ಲಡೆಯೂ ಪೈಪೋಟಿ
ಈ ಸಮಸ್ಯೆಗಿಲ್ಲ ಸಾಟಿ

ಎಲ್ಲಿ ನೋಡಿದರೂ ಜನರು
ಸೌಲಭ್ಯ ವಂಚಿತರ ತವರು
ಹಬ್ಬಿದೆ ಸಮಸ್ಯೆಯ ಬೇರು
ಸಿಗುತಿಲ್ಲ ಜನರಿಗೆ ಅನ್ನ ನೀರು

ಶಿಕ್ಷಣದಿ ಇಲ್ಲ ಅವಕಾಶ
ಆರ್ಥಿಕ ಪ್ರಗತಿಯ ನಾಶ
ದೇಶದ ಅಭಿವೃದ್ಧಿ ವಿನಾಶ
ಬರಿದಾಗಿದೆ ದೇಶದ ಕೋಶ

ಮನೆಗೊಂದು ಮಗುವಿರಲಿ
ಮನೆ ತುಂಬ ನಗುವಿರಲಿ
ಮನೆ ಮನೆಯಲೂ ಇರಲಿ
ಜನಸಂಖ್ಯೆ ನಿಯಂತ್ರಣದಲಿ

ಮೂಡಿಸುವ ಎಲ್ಲರಲೂ ಜಾಗೃತಿ
ಹಳ್ಳಿ ನಗರದಲೂ ಹೇಳುವ ನೀತಿ
ಮೀರದಿರಲಿ ಜನಸಂಖ್ಯೆ ಮಿತಿ
ದೇಶದೆಲ್ಲೆಡೆ ಆಗಲಿ ಉನ್ನತಿ









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ