ಸೋಮವಾರ, ಅಕ್ಟೋಬರ್ 5, 2020

ಗುರುಮಾತೆ



ನನ್ನಯ ಮೊದಲ ಗುರುಮಾತೆ
ಅವಳು ನನಗೆ ಜನನಿಯಂತೆ
ತೋರಿದಳು ಪ್ರೀತಿ ಮಮತೆ
ವಿದ್ಯೆ ಕಲಿಸಿದ ಜ್ಞಾನದಾತೆ

ಅಕ್ಷರಮಾಲೆ ಕಲಿಸಿದವಳು
ತಪ್ಪು ತಿದ್ದಿ ಬೆಳೆಸಿದವಳು
ನೀತಿ ಕಥೆಯ ಹೇಳಿದವಳು
ಕರುಣೆಯ ಕಡಲು ಇವಳು

ಬಿದ್ದಾಗ ಕೈಹಿಡಿದು ಎತ್ತಿದವಳು
ನಾ ಗೆದ್ದಾಗ ಸಂಭ್ರಮಿಸಿದವಳು
ಊಟ ಮಾಡಿಸಿದ ತಾಯಿ ಇವಳು
ವಿಶಾಲ ಮಾತೃ ಹೃದಯದವಳು

ಪದಗಳಿಗೆ ನಿಲುಕದ ಶಕ್ತಿ ಇವಳು
ಮನಕೆ ಧೈರ್ಯ ತುಂಬಿದವಳು
ಜೀವನದ ದಾರಿ ತೋರಿದವಳು
ಸತ್ಯ ಮಾರ್ಗದಿ ನಡೆಸಿದವಳು









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ