ಕಾರ್ಮಿಕ
ದುಡಿಯುತಿಹನು ಕೂಲಿಯಾಗಿ
ನೋವು-ದಣಿವನೆಲ್ಲ ನುಂಗಿ
ಕುಟುಂಬದ ಒಪ್ಪತ್ತಿನ ಊಟಕಾಗಿ
ಅಲ್ಲ ದುಡಿಮೆಯು ಶೋಕಿಗಾಗಿ
ದಿನವೂ ಬೆವರು ಹರಿಸುವ
ಕಂಬನಿಯನು ಸುರಿಸುವ
ಕಷ್ಟಗಳ ಹೊದ್ದು ಬದುಕುವ
ಬವಣೆಯಲೆ ಬೇಯುವ
ಕಾರ್ಮಿಕನ ಗೋಳ ಕೇಳುವರಿಲ್ಲ
ಇವನ ಶ್ರಮವನು ಬಲ್ಲವರಿಲ್ಲ
ಆಳುವವರ ದರ್ಪ ತಡೆವರಿಲ್ಲ
ದೌರ್ಜನ್ಯ ಮಿತಿ ಮೀರಿದೆಯಲ್ಲ
ದೇಶದ ಬೆನ್ನೆಲುಬು ಕಾರ್ಮಿಕರು
ಅವರು ನಮ್ಮಂತೆ ಮನುಜರು
ಆಗದಿರಲಿ ಅವಕಾಶ ವಂಚಿತರು
ಬದುಕಿ ಬಾಳಲಿ ನಮ್ಮಂತೆ ಇವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ