ಭಾನುವಾರ, ಅಕ್ಟೋಬರ್ 4, 2020
ಕೆಚ್ಚೆದೆಯ ಕಲಿ ರಾಯಣ್ಣ
ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ
ಶೌರ್ಯ ಧೈರ್ಯವೇ ಇವನ ಮೈಬಣ್ಣ
ವೀರ ಸಿಪಾಯಿಗಳಿಗೆ ಇವನು ಅಣ್ಣ
ಅಗಸ್ಟ್ ಹದಿನೈದರಂದೆ ಜನಿಸಿದ ರಾಯಣ್ಣ
ಕೆಂಚಮ್ಮಾಜಿ, ಭರಮಪ್ಪನ ಮಗನಿವನು
ಸಂಗೊಳ್ಳಿಯ ವೀರ ಪುತ್ರ ಇವನು
ಕೆಚ್ಚೆದೆಯ ವೀರ ಶೂರ ಕಲಿ ಇವನು
ಬ್ರಿಟೀಷರೊಡನೆ ಹೋರಾಟಕೆ ನಿಂತನು
ಸ್ವಾತಂತ್ರ್ಯ ಸಮರದಿ ಪ್ರಮುಖ ಪಾತ್ರ
ಚೆನ್ನಮ್ಮನಿಗಾದ ಇವನು ವೀರ ಪುತ್ರ
ಹಿಡಿದನು ಸಂಗೊಳ್ಳಿ ಸಾಮ್ರಾಜ್ಯದ ಸೂತ್ರ
ಬ್ರಿಟೀಷರಿಗೆ ನೀಡಿದ ರಣಕೆ ಆಹ್ವಾನ ಪತ್ರ
ಸಾಧುವಿನ ವೇಷದಿ ಸೇರಿ ಸೆರೆಮನೆಯ
ಚೆನ್ನಮ್ಮಾಜಿಗೆ ನೀಡಿ ಭರವಸೆಯ
ಊದಿದನು ಸ್ವಾತಂತ್ರ್ಯದ ಕಹಳೆಯ
ಮುನ್ನಡೆಸಿದನು ಸಂಗೊಳ್ಳಿ ಸೇನೆಯ
ಬ್ರಿಟೀಷರ ಮೋಸಕೆ ಬಲಿಯಾದನು
ವೀರ ಮರಣಕೆ ಶರಣನಾದನು
ಇತಿಹಾಸದ ಪುಟವ ಸೇರಿದನು
ಸಂಗೊಳ್ಳಿ ಮರೆಯಲಾರದ ವೀರನು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ