ಚರಣ ಕಮಲಗಳಿಗೆ ವಂದನೆ
ಮಾಡದಿರುವೆ ಎಂದು ನಿಂದನೆ
ಜ್ಞಾನ ನೀಡಿ ನಮ್ಮನು ಕಾವನೆ
ಗುರುವೇ ದೇವನೆಂಬ ಭಾವನೆ
ಜ್ಞಾನ ಜ್ಯೋತಿಯನು ಬೆಳಗಿಸುವ
ಅಂಧಕಾರವ ದೂರ ಓಡಿಸುವ
ಅಕ್ಕರೆಯ ಕೊಡುವ ಗುರುವ
ನೀಡು ನೆನೆಯುವಂತ ಮನವ
ಹೊಮ್ಮಿಸಿ ಸುಜ್ಞಾನದ ಕಿರಣ
ತುಂಬಿಸಿ ಮೌಲ್ಯಗಳ ಸ್ಪುರಣ
ಹರಿಸಿ ನಿನ್ನಯ ಪ್ರೀತಿ ಕರುಣ
ಸ್ಪರ್ಶಮಣಿಯು ನಿನ್ನ ಚರಣ
ಶಿಲೆಯ ಆಗುವುದು ಶ್ರಮದೆ ಶಿಲ್ಪ
ಸಾಧನೆಗೆ ನೀಡುವೆ ಕಾಯಕಲ್ಪ
ಅಮರನಾಗುವನು ನಿನ್ನಿಂದ ಅಲ್ಪ
ನಿನಗಿಲ್ಲ ಬೇಧಭಾವವು ಸ್ವಲ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ