ನವವಧು
ಹುಟ್ಟಿ ಬೆಳೆದಾ ಮನೆಯ ಬಿಟ್ಟು
ಒಡಹುಟ್ಟಿದವರನೂ ಬಿಟ್ಟು
ಜನ್ಮವಿತ್ತ ದೇವರುಗಳ ಬಿಟ್ಟು
ಒಡನಾಡಿಗಳನೆಲ್ಲ ಬಿಟ್ಟು
ಅಕ್ಕರೆಯ ಸೇರನು ಒದ್ದು ಬಂದಳು
ಸೊಸೆಯಾಗಿ ಹೊಸ ಮನೆ ಸೇರಿದಳು
ಮಡದಿಯೆಂಬ ಪಟ್ಟವ ಏರಿದಳು
ಹೊಸ ಕನಸಗಳ ಕಂಗಳಲಿ ಕಂಡಳು
ಅಲ್ಲಿ ಕೂತರೆ ಅತ್ತೆ ಏನೆನ್ನುವರು
ಇಲ್ಲಿ ನಿಂತರೆ ಮಾವ ಏನೆನ್ನುವರು
ಅಡಿಗೆಯೂ ಬಾರದು ಚೂರು-ಪಾರು
ಕ್ಷಣವೂ ನೆನಪಾಗುತಿಹುದು ತವರು
ಇನ್ನು ಹೇಗಿರುವನೋ ಪತಿರಾಯ
ಆಗುವನೆ ಇವನು ಮನದ ಇನಿಯ
ಆಷಾಢ ಬರಲು ಸೇರಿ ತೌರು ಮನೆಯ
ಹಾಡುತಲಿ ಕಹಿ ವಿರಹದಾ ಗೀತೆಯ
ಬರಲು ಶ್ರಾವಣ ಸೇರಿ ಪತಿಗೃಹವನು
ಪೂಜಿಸಿ ವರ ಮಹಾಲಕ್ಷ್ಮೀಯನು
ಬೇಡಿ ಸಂಸಾರ ಸುಖ, ಸಂತಾನವನು
ಸಾಮರಸ್ಯದಿ ಕೂಡಿ ಬಾಳು ಹಸನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ