ಭಾನುವಾರ, ಅಕ್ಟೋಬರ್ 4, 2020

ಮನುಜ ಕುಲವೊಂದೆ

ಬಂಡಾಯ ಕವನ

ಕರಿಯರೆಂದು ಕೂಗಿ ಜರಿಯಬೇಡಿ
ಎಲ್ಲರೂ ಮನುಜರೇ ಮರೆಯಬೇಡಿ
ನಮಗೂ ಒಂದು ಬದುಕಿದೆ ಕಾಡಬೇಡಿ
ಎಲ್ಲೆಡೆಯೂ ಬೇಧ-ಭಾವ ಮಾಡಬೇಡಿ

ಕರಿಯ ಬಣ್ಣಕೂ ಇದೆ ಅದರದೆ ಬೆಲೆ
ಕರಿಯರಿಗೂ ಇದೆ ಅವರದೆ ಆದ ನೆಲೆ
ಕಿತ್ತುಕೊಳ್ಳಬೇಡಿ ನೀರು, ಅನ್ನದ ಒಲೆ
ದೇವನೊಬ್ಬ ನೋಡುತಿರುವ ಮೇಲೆ

ಶಾಶ್ವತವಲ್ಲ ಗಳಿಸಿದ ಹಣ ಸಂಪತ್ತು
ಬದಲಾಗುತಲಿಹುದು ಈ ಜಗತ್ತು 
ನಿಮ್ಮ ಸ್ಥಾನಕೂ ಬರಬಹುದು ಕುತ್ತು
ನಂಬಿ ಬದುಕುವವರು ನಾವು ನಿಯತ್ತು

ಬಣ್ಣದಲಿ ಹೆಚ್ಚುಗಾರಿಕೆ ಏನಿದೆ ಅಣ್ಣ 
ಜಗದ ಮನುಜರೆಲ್ಲ ಒಂದೇ ಅಣ್ಣ 
ನಮ್ಮಲಿ ಮೇಲು ಕೀಳು ಬೇಡ ಅಣ್ಣ 
ಎಲ್ಲರ ರಕ್ತದ ಬಣ್ಣ ಒಂದೇ ಅಣ್ಣ 

ನಮಗೂ ಬದುಕು ಬಿಡಿ ದಯಮಾಡಿ
ನಮ್ಮ ಅನ್ನವ ಕಿತ್ತು ಕಿತ್ತು ತಿನ್ನಬೇಡಿ
ನಮದೂ ಈ ಭೂಮಿ ಬದುಕಗೊಡಿ
ಹಕ್ಕು ಕಸಿದು ಸಮಾಧಿ ಮಾಡಬೇಡಿ

ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ 
13/07/2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ