ಭಾನುವಾರ, ಅಕ್ಟೋಬರ್ 4, 2020

ನಿಲ್ಲಲಿ ಶೋಷಣೆ

 ಬಂಡಾಯ ಕವನ

ಕಾರ್ಖಾನೆಯಲಿ ಬೆವರು ಹರಿಸಿ
ತೋಳ ಬಲವ ಬಂಡವಾಳವಾಗಿಸಿ
ಮೈಯ ಮೂಳೆಯನು ಸವೆಸಿ
ದುಡಿವ ನಮ್ಮ ಕಡೆ ಗಮನ ಹರಿಸಿ

ಅನ್ನ ಬಟ್ಟೆಗಾಗಿ ನಮ್ಮ ಶ್ರಮವೂ
ನಮ್ಮ ದುಡಿಮೆ ನಂಬಿಹ ಕುಟುಂಬವೂ
ಕೆಲಸ ಇಲ್ಲವಾದರೆ ಇಲ್ಲ ಊಟವೂ
ಶೋಕಿಗಾಗಿ ಅಲ್ಲ ನಮ್ಮ ಕೆಲಸವೂ

ನೀವು ಬೆಳೆಯಲು ಬೇಕು ನಾವುಗಳು
ನೀಡಿ ನಮಗೂ ನಮ್ಮ ಸೌಲಭ್ಯಗಳು
ಆಗಲಿ ಒಳ್ಳೆಯ ಬದಲಾವಣೆಗಳು
ದೂರಾಗಲಿ ಕಾರ್ಮಿಕರ ಬವಣೆಗಳು

ಬಡವರೆಂದು ಶೋಷಿಸದಿರಿ ನಮ್ಮನು
ನೀಡಿ ನಮಗೆ ನಮ್ಮಯ ಹಕ್ಕನು
ಜೊತೆಗೆ ನಮ್ಮ ಶ್ರಮಕೆ ಗೌರವವನು
ಹಸನುಗೊಳಿಸಿ ನಮ್ಮ ಬದುಕನು

ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ 
27/07/2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ