ಮೊಘಲ್ ಸರಾಯಿಯಲಿ ಜನಿಸಿದ ಈತ
ದಕ್ಷ-ಪ್ರಾಮಾಣಿಕನೆಂಬ ಮಾತು ಜನಜನಿತ
ಬಾಲ್ಯದಲಿ ಹಾಸಿ ಹೊದ್ದ ಬರಿಯ ಬಡತನ
ಬರಿಗಾಲಲೆ ನಡೆದು ಕಳೆದ ಬಾಲ್ಯದ ಜೀವನ
ಗಾಂಧಿಯಿಂದ ಆದನು ಇನನು ಪ್ರಭಾವಿತ
ಸ್ವಾತಂತ್ರ್ಯ ಹೋರಾಟಕೆ ಧುಮುಕಿದನೀತ
ಲಲಿತಾದೇವಿಯೊಂದಿಗೆ ಆಯಿತು ಮದುವೆ
ದೇಶ ಸೇವೆಗೈವ ದೃಢ ನಿರ್ಧಾರದ ನಡುವೆ
ನಾಯಕ ಬ್ರಿಟಿಷ ವಿರೋಧಿ ಚಳುವಳಿಗೆ
ಏಳು ವರ್ಷ ಕಳೆದ ಸೆರೆಮನೆಯೊಳಗೆ
ದೇಶಕೆ ಸಲ್ಲಿಸಿದ ಸೇವೆಯು ಅಪಾರ
ಇಂದಿಗೂ ಪ್ರಸಿದ್ಧ ಶಾಸ್ತ್ರೀ ಸೋಮವಾರ
ಸ್ವಾತಂತ್ರ ಭಾರತದ ಎರಡನೇ ಪ್ರಧಾನಿ
ಶಾಸ್ತ್ರೀ ಎಂಬ ಬಿರುದಾಂಕಿತ ಸ್ವಾಭಿಮಾನಿ
ಮರಣಾನಂತರ ದೊರೆಯಿತು ಭಾರತರತ್ನವು
ದೆಹಲಿಯಲಿ ಸ್ಮಾರಕ ನಿರ್ಮಿಸಿ ಸಮ್ಮಾನವು
ಗಾಂಧೀಜಿ-ಶಾಸ್ತ್ರೀಜಿ ಇಬ್ಬರನು ನೆನೆಯುವ
ಸಪರ್ಪಣಾ ಭಾವದ ರಾಜಕಾರಣಿಗೆ ನಮಿಸುವ
ಜೈ ಜವಾನ್ ಜೈ ಕಿಸಾನ್ ಇವರ ಧ್ಯೇಯವಾಕ್ಯ
ಇವರ ಕಾಲದಲಿ ದೇಶವು ಪ್ರಗತಿಯಲಿ ಔನತ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ