ಭಾನುವಾರ, ಅಕ್ಟೋಬರ್ 4, 2020

ಮುಂಜಾನೆಯ ಮಳೆ

ಮುತ್ತಿನ ಹನಿಗಾಗಿ ಕಾಯ್ವ ಇಳೆ
ಮುಂಜಾನೆಯ ಸೋನೆ ಮಳೆ
ತೊಳೆಯಿತೆಲ್ಲ ಇಳೆಯ ಕೊಳೆ
ಜನಿಸಿತಾಗ ಹಚ್ಚಹಸಿರ ಬೆಳೆ

ಹಸಿರ ಸೀರೆಯುಟ್ಟ ಭುವಿ
ನಾಚಿ ನೀರಾದಳು ಬರಲು ರವಿ
ಹೊಂಗಿರಣದ ಸ್ಪರ್ಶದ ಸವಿ
ಕೇಳುತಿದೆ ಪ್ರೇಮರಾಗದ ಪಲ್ಲವಿ

ಹಾಲಿನಂತೆ ಹರಿವ ನೀರ ಝರಿ
ಎಂಥ ಚಂದ ಭೂರಮೆಯ ಸಿರಿ
ತೆರೆದಂತಿದೆ ಸ್ವರ್ಗದ ದಾರಿ
ಅದಕೆ ನಿಲುಕದ ಸೊಬಗ ವೈಖರಿ

ಸಕಲ ಜೀವರಾಶಿಗಿದುವೆ ನೆಲೆ
ಅದ್ಭುತ ದೇವ ಸೃಷ್ಟಿಯ ಕಲೆ
ಬೆಳಗಿದುವೆ ಚೈತನ್ಯದ ಸೆಲೆ
ರಮ್ಯತೆಗೆ ಕಟ್ಟಲಾದೀತೆ ಬೆಲೆ??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ