ಕಸ್ತೂರಿ ಕನ್ನಡವು ನಮ್ಮ ಭಾಷೆಯೆಂಬ ಹಿರಿಮೆ
ಕರುನಾಡು ನಮ್ಮ ತಾಯ್ನಾಡು ಎಂಬ ಗರಿಮೆ
ವಿವಿಧತೆಯಲಿ ಏಕತೆಯ ಸಾರುವ ನಾಡು
ಶ್ರೀಗಂಧ-ತೇಗ, ಖಗ-ಮೃಗಗಳ ಬೀಡು
ಸಪ್ತ ಜ್ಞಾನಪೀಠ ಕವಿಗಳಿಗಿದು ತಾಯ್ನಾಡು
ಪಂಪ ಕುಮಾರವ್ಯಾಸ ಉದಿಸಿಹ ನಾಡು
ತಾಯಿ ಕಾವೇರಿ ಉಗಮವಾದ ಪುಣ್ಯನಾಡು
ಕಾಮಧೇನು ಕಲ್ಪವೃಕ್ಷ ತುಂಬಿರುವ ನಾಡು
ಶಿಲೆ ಶಿಲೆಯಲೂ ಶಿಲ್ಪಕಲೆ ಅರಳಿದ ನಾಡು
ಗಂಗ-ಕದಂಬರಾಳಿದಂತ ವೈಭವದ ಗೂಡು
ಜೋಗ ಜಲಪಾತ ಧುಮ್ಮಿಕ್ಕಿದ ಸಿರಿನಾಡು
ವಿಶ್ವ ವಿಖ್ಯಾತ ಹಂಪಿ, ಬಾದಾಮಿಯ ನಾಡು
ಮೈಸೂರು ಅರಮನೆ, ಬೃಂದಾವನದ ನಾಡು
ಸಂಸ್ಕೃತಿ-ಸಂಸ್ಕಾರಗಳಿಗೆ ಇದುವೇ ಗೂಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ