ದೇವನ ಅವಿಸ್ಮರಣೀಯ ಕಾಣಿಕೆ
ಹಸಿರ ಹಿರಿಯ ಈ ವನಮಾಲಿಕೆ
ಚೆಲುವಿನ ಸಿರಿಗಿಲ್ಲವೂ ಹೋಲಿಕೆ
ಚಿರಯೌವ್ವನದ ಸೊಬಗ ಕನ್ನಿಕೆ
ಪರಮ ಪಾವನವಾದ ಜಲವು
ಸ್ಥಿರತೆ ಸಾರುವ ಕಲ್ಲಿನ ಚೆಲುವು
ಮೆರಗು ನೀಡುತಿಹ ಕ್ಷಿತಿಜವು
ಮೈಮರೆತು ವೀಕ್ಷಿಸುವ ಮನವು
ಕೌತುಕವು ಸೃಷ್ಟಿಯ ವೈಚಿತ್ರ್ಯ
ಭುವಿ-ಭಾನಿನೊಳು ಸಾಮರಸ್ಯ
ಪ್ರಕೃತಿಯಿದು ಪುಣ್ಯ ಪಾವಿತ್ರ್ಯ
ರಸಿಕ ಕಂಗಳಿಗಿದೋ ಸ್ವಾತಂತ್ರ್ಯ
ಪದಗಳಿಗೆ ನಿಲುಕದ ಸೊಬಗು
ಹೊಂಬೆಳಕು ನೀಡಿದೆ ಮೆರಗು
ಮಾಧುರ್ಯವು ಹಕ್ಕಿಯ ಕೂಗು
ಮುತ್ತಿನ ಹನಿಗಳ ಬಿನ್ನಾಣ ಬೆಡಗು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ