ಶುಕ್ರವಾರ, ನವೆಂಬರ್ 6, 2020
ಮೈಸೂರು ದಸರಾ
ದುರ್ಗೆಯಿಂದ ಮಹಿಷಾಸುರನ ಸಂಹಾರ
ಈ ದೇವಿಯ ಪೂಜಿಸುವ ಉತ್ಸವ ದಸರ
ವಿಧ ವಿಧವಾದ ಕಲಾ ವೈಭವದ ಹಂದರ
ನೋಡಲು ಬಲು ಆಕರ್ಷಕ, ಸುಂದರ
ನವ ಅವತಾರದಿ ದುರ್ಗೆಯು ಬರುವಳು
ನವ ವಿಧದ ಪೂಜೆಯ ಸ್ವೀಕರಿಸುವಳು
ಮಹಿಷಾಸುರಮರ್ದಿನಿ ಚಾಮುಂಡಿ ಇವಳು
ಲೋಕವ ಕಾಯುವ ದೇವತೆಯಾಗಿಹಳು
ಮೈಸೂರಿನಲಿ ಆನೆಯ ಮೇಲೆ ಅಂಬಾರಿ
ಗಾಂಭೀರ್ಯದಲಿ ಜಂಬೂ ಸವಾರಿ
ರಾಜಮನೆತನದವರ ಉಸ್ತುವಾರಿ
ಜನ ಸೇರುವರು ದಸರೆಗೆ ಮಿತಿಮೀರಿ
ಕಣ್ಮನ ಸೆಳೆಯುವ ದೀಪಾಲಂಕಾರವು
ಸಾಂಸ್ಕೃತಿಕ ಕಲೆಗಳಿಗಿದುವೇ ತಾಣವು
ದೇಶ-ವಿದೇಶದಲೂ ದಸರಾ ಪ್ರಸಿದ್ಧವು
ಕರ್ನಾಟಕದ ವೈಭವದ ನಾಡಹಬ್ಬವು
ಚಾಮುಂಡಿಬೆಟ್ಟದಲಿ ವಿಶೇಷ ಪೂಜೆಯು
ವೈಭವದಲಿ ತೇಲುವ ಅರಮನೆಯು
ಕಣ್ಮನವ ಸೆಳೆಯುವ ಹಬ್ಬ ದಸರೆಯು
ಇರಲಿ ಎಲ್ಲರ ಮೇಲೆ ದೇವಿಯ ಕೃಪೆಯು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ