ಮಕ್ಕಳು
ಮಕ್ಕಳ ಮನವಿದು ಹೂವಿನಂತೆ
ಮಗ್ಧತೆಯ ಪ್ರತಿ ರೂಪದಂತೆ
ನಿಷ್ಕಲ್ಮಷತೆ ತುಂಬಿದ ಹೃದಯ
ಆ ನಗುವಿನಲೇ ಜಗ ತನ್ಮಯ
ಮನೆಯೇ ಮೊದಲ ಪಾಠಶಾಲೆ
ಜನನಿಯೇ ಮೊದಲ ಗುರುವು
ಹಾಕಬೇಕು ಭದ್ರ ಬುನಾದಿ ನೆಲೆ
ಮೌಲ್ಯಗಳೇ ಬಾಳಿಗೆ ಬಲವು
ಉತ್ತಮ ಆಹಾರವ ಒದಗಿಸಿ
ವಿದ್ಯೆ ನೀಡಿ ಬಾಳನು ಬೆಳಗಿಸಿ
ಬೇಕು ಬೇಡಗಳನು ಪೂರೈಸಿ
ಉಜ್ವಲ ಭವಿಷ್ಯಕೆ ಹಾರೈಸಿ
ಕೆಲಸವು ಬೇಡವು ಬಾಲ್ಯದಲಿ
ಬೆಳೆಯುವ ಸಿರಿ ಮೊಳಕೆಯಲಿ
ಉತ್ತಮ ಶಿಕ್ಷಣವು ದೊರೆಯಲಿ
ಸಂಸ್ಕಾರ ಸಂಸ್ಕೃತಿಯೂ ಇರಲಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ನಮ್ಮ ಸಮಾಜದ ನಂದಾದೀಪಗಳು
ಹೆತ್ತವರಿಗೆ ಇವರೇ ಎಂದೂ ಕಣ್ಣುಗಳು
ನಮ್ಮ ಬದುಕಿನ ಹೊಸ ಕನಸುಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ