ಶುಕ್ರವಾರ, ನವೆಂಬರ್ 6, 2020
ಸಂವಿಧಾನ ಶಿಲ್ಪಿ
ಮಹಾರಾಷ್ಟ್ರದ ರತ್ನಾಗಿರಿಯಲಿ ಭೀಮನ ಜನನ
ಬಾಲ್ಯದಲೇ ತಾಯಿ ಭೀಮಾಬಾಯಿಯ ನಿಧನ
ಅತ್ತೆ ಮೀರಾಳ ಜೊತೆ ಬಡತನದಲೇ ಜೀವನ
ಇವರು ಅಸ್ಪೃಶ್ಯತೆಯ ವಿರುದ್ಧ ಸಾರಿದರು ಕದನ
ಪಡೆದರು ಅರ್ಥಶಾಸ್ತ್ರ, ರಾಜನೀತಿಯ ಪದವಿಯನು
ವಿದೇಶದಲಿ ಸಂಪಾದಿಸಿದರು ವಕೀಲಿ ವೃತ್ತಿಯನು
ಪಡೆದರು ಪರಿಶ್ರಮದಿ ಡಾಕ್ಟರೇಟ್ ಪದವಿಯನು
ಸ್ಥಾಪಿಸಿದರು ದಲಿತ ವರ್ಗದ ಕಲ್ಯಾಣ ಸಂಸ್ಥೆಯನು
ನೀಡಿದರು ಮನುಸ್ಮೃತಿ ಚಳುವಳಿಗೆ ಚಾಲನೆ
ಮಾಡಿದರು ಸಮಾನತೆಯ ಹಕ್ಕಿನ ಪ್ರತಿಪಾದನೆ
ಹೂಡಿದರು ಜಾತಿಪದ್ಧತಿಯ ವಿರುದ್ಧ ಪ್ರತಿಭಟನೆ
ಯಶಸ್ವಿಯಾಗಿ ಮಾಡಿದರು ಕಾರ್ಯಸಾಧನೆ
ಇವರು ಭಾರತದ ಮಹಾನ್ ಸಂವಿಧಾನ ಶಿಲ್ಪಿಯು
ಅಪಾರ ಜ್ಞಾನದ ಕಡಲು ಈ ಪುಸ್ತಕ ಪ್ರೇಮಿಯು
ಕೊನಯಲಿ ಶಾಂತಿಗಾಗಿ ಬೌದ್ಧ ಧರ್ಮಿಯಾದರು
ಇವರಿಗೆ ಭಾರತರತ್ನವನು ನೀಡಿ ಗೌರವಿಸಿದರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ