ನಮ್ಮ ಹೆಮ್ಮೆಯ ವೇದಿಕೆ ಅಕ್ಷರ ದೀಪ
ಹಚ್ಚುವ ನಾವು ಇಲ್ಲಿ ಅಕ್ಷರಗಳ ದೀಪ
ಸಾಹಿತ್ಯಕೆ ಕೊಡುವುದು ಹೊಸ ರೂಪ
ಕವಿ ಮನಸುಗಳಿಗಿದುವೇ ನಂದಾದೀಪ
ಅಕ್ಷರದ ದೀಪ ಹಚ್ಚಲು ವೇದಿಕೆ ಇದುವು
ಸೃಜನಶೀಲತೆಗೆ ಇದು ಆಗಿಹುದು ಒಡಲು
ಉತ್ತಮ ಸ್ಪರ್ಧೆಯ ವಿಧಗಳು ಹತ್ತು ಹಲವು
ಸಾಹಿತ್ಯ ಜ್ಞಾನವನು ಹೊತ್ತು ತರುವ ಕಡಲು
ನಮ್ಮ ವೇದಿಕೆಯೆಂಬ ಹೆಮ್ಮೆ ನಮಗೆ
ನಿರಂತರವೂ ಸಾಹಿತ್ಯದ ಬೆಳವಣಿಗೆ
ಕೀರ್ತಿ ಹರಡಲಿ ಜಗದ ತುದಿಯವರೆಗೆ
ದಿನವೂ ಕನ್ನಡ ಸಾಹಿತ್ಯದ ಮೆರವಣಿಗೆ
ಪ್ರತಿಭೆಗಳಿಗೆ ದೊರೆಹುದು ಇಲ್ಲಿ ಪುರಸ್ಕಾರ
ಇದುವು ಕವಿ ಹೃದಯಗಳ ಭಾವದ ಸಾಗರ
ಸೃಜನಶೀಲ ವಿಚಾರಗಳ ಸುಂದರ ಹಂದರ
ಕವಿ ಮನಗಳಿಗಿದು ಅವಕಾಶಗಳ ಆಗರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ