ಬುಧವಾರ, ನವೆಂಬರ್ 18, 2020

ಕರುನಾಡು



ನಮ್ಮದಿದು ನಮ್ಮದಿದು ಚೆಲುವ ಕನ್ನಡ ನಾಡು
ಶಿಲ್ಪಕಲೆ ಸಂಸ್ಕೃತಿಯ ವೈಭವದ ಸಿರಿನಾಡು
ಹಸಿರ ಸಿರಿ ಮೈತಳೆದ ಸೊಬಗಿನ ಕರುನಾಡು
ತೆಂಗು-ಕಂಗು, ಭತ್ತ-ರಾಗಿ ಬೆಳೆಯುವ ನಾಡು
ಸಾಹಿತ್ಯ ಸಿರಿಯಲೂ ಮೇರು ಆಗಿಹ ನಾಡು

ಕೃಷ್ಣೆ ಕಾವೇರಿ ಶರಾವತಿ ತುಂಗೆಯರ ನೆಲೆವೀಡು
ಸಹ್ಯಾದ್ರಿಯ ಸಾಲು ಮೈತಳೆದ ಕರುನಾಡು
ಕೆಚ್ಚೆದೆಯ ವೀರರಿಗೆ ಜನುಮ ನೀಡಿದ ಗೂಡು
ಜಕ್ಕಣ-ಡಂಕಣನ ಶಿಲ್ಪಕಲೆಗೆ ಹೆಸರಾದ ನಾಡು
ಪಂಪ ಕುಮಾರ ರಾಘವರುದಿಸಿದ ತಾಯ್ನಾಡು

ಕಸ್ತೂರಿ ಕನ್ನಡದ ಕಂಪು ಹರಡಿಹ ನಾಡು
ಕುವೆಂಪು ಬೇಂದ್ರೆ ಮಾಸ್ತಿಯರ ತಾಯ್ನಾಡು
ತಾಯಿ ಭುವನೇಶ್ವರಿಯು ನೆಲೆಸಿಹ ಸಿರಿನಾಡು
ಶಿಲ್ಪಕಲೆಗೆ ಹೆಸರಾದ ದೇವಾಲಯಗಳ ಗೂಡು
ಬೆಲೆ ಬಾಳುವ ಚಿನ್ನ ದೊರೆಯುವ ನಾಡು

ಋಷಿಗಳಾ ಕವಿಗಳಾ ವೀರ-ಶೂರರಾ ತಾಯ್ನಾಡು
ಹುಲಿ ಸಿಂಹ ಆನೆ ನವಿಲು ಸಾರಂಗದ ನೆಲೆವೀಡು
ತೇಗ ಗಂಧ ಆಲ ಬೇಲಗಳ ಹಸಿರು ಸಿರಿಯ ನಾಡು
ವಿಶ್ವ ವಿಖ್ಯಾತ ಜೋಗ ಜಲಪಾತದ ಸೊಬಗ ನಾಡು
ಕಲ್ಲುಕಲ್ಲಿನಲೂ  ವೈಭವವ ಹೊತ್ತ ಪುಣ್ಯದ ನಾಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ