ಗುರುವಾರ, ನವೆಂಬರ್ 19, 2020
ರವಿ ಬೆಳಗೆರೆ
ಜನ್ಮವು ಬಳ್ಳಾರಿ ಸತ್ಯನಾರಾಯಣ ಪೇಟೆಯು
ಕೈಬೀಸಿ ಕರೆಯಿತು ಅಧ್ಯಾಪಕ ವೃತ್ತಿಯು
ನಟನೆ, ನಿರೂಪಣೆ, ಬರವಣಿಗೆ ಪ್ರವೃತ್ತಿಯು
ಮಂತ್ರಮುಗ್ಧವಾಗಿಸಿತು ಇವರ ಬರವಣಿಗೆಯು
ಬರಹ ಲೋಕದ ಮಹಾ ಮಾಂತ್ರಿಕ
ಕಂಚಿನ ಕಂಠದ ಅದ್ಭುತ ನಿರೂಪಕ
ಪಾಕ್ಷಿಕ, ಮಾಸಿಕ ಪತ್ರಿಕೆಯ ಸಂಪಾದಕ
ಪ್ರಾರ್ಥನಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ
ಯುವ ಮನಸುಗಳಿಗೆ ಬರವಣಿಗೆಯ
ಗೀಳು ಹಿಡಿಸಿದ ಮಹಾ ಜಾದೂಗಾರ
ಜ್ಞಾನ ದೀಪವ ಹೊತ್ತಿಸಿದ ದೈವ ನೀ
ಪ್ರತೀ ಅಕ್ಷರಕೂ ಜೀವ ತುಂಬಿದ ಕಥೆಗಾರ
ಹೇಳಿ ಹೋಗು ಕಾರಣ ಎನ್ನುತಲಿ
ಹೇಳದೆ ಹೋದೆ ಬಾರದ ಲೋಕಕೆ
ಯಾರು ಹೇಳುವರು ಇನ್ನು ಸಾಂತ್ವನ
ನೋವು-ದುಃಖ ತುಂಬಿದ ಮನಕೆ
ಭಾವುಕತೆ, ಧೈರ್ಯದಲಿ ಮೀರಿಸುವರಿಲ್ಲ
ಬರಹವಣಿಗೆ ಲೋಕವೇ ಅನಾಥವಾಯ್ತಲ್ಲ
ಕಂಚಿನ ಕಂಠದಾ ಅಬ್ಬರವು ಇನ್ನಿಲ್ಲ
ಅಕ್ಷರ ಮಾಂತ್ರಿಕನ ಬದುಕು ಮುಗಿಯಿತಲ್ಲ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ