ಶುಕ್ರವಾರ, ನವೆಂಬರ್ 6, 2020

ಕಸ್ತೂರಿ ಕನ್ನಡ


ಕಸ್ತೂರಿ ಕನ್ನಡವು ನಮ್ಮ ನುಡಿಯು
ಅಭಿಜಾತ ಭಾಷೆ ಎಂಬ ಹೆಮ್ಮೆಯು
ಆಗಿಹುದು ಇದು ಲಿಪಿಗಳ ರಾಣಿಯು
ಕರುನಾಡು ನಮ್ಮ ತಾಯಿ ಗುಡಿಯು

ಎನಿತು ನಮ್ಮ ನುಡಿಯು ಸೊಗವು
ಅತೀ ಮಧುರ ಕನ್ನಡ ಸ್ವರಾಕ್ಷರವು
ಕೋಗಿಲೆಯ ನದಿಯಂತೆ ಇಂಪು
ನಮ್ಮ ನುಡಿಯೇ ನಮ್ಮ ಬಲವು

ಬ್ರಾಹ್ಮಿ ಲಿಪಿಯಿಂದ ಉಗಮ ಕನ್ನಡವು
ಸಾವಿರದ ಐನೂರು ವರ್ಷದ ಇತಿಹಾಸವು
ಹಲ್ಮಿಡಿ ಕನ್ನಡದ ಮೊದಲ ಶಾಸನವು
ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿಹವು

ಪಂಪ ಕುಮಾರವ್ಯಾಸರ ಕವಿಗಳ ಹಿರಿಮೆ
ಕುವೆಂಪು ಮಾಸ್ತಿ ಸಾಹಿತ್ಯದ ಗರಿಮೆ
ನವ ವಿಧದ ಸಾಹಿತ್ಯಕಿದು ಒಲುಮೆ
ಸಿರಿಗನ್ನಡವು ನಮ್ಮ ಭಾಷೆಯೆಂಬ ಹೆಮ್ಮೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ