ಹೊಸ ಮನ್ವಂತರಕೆ ನಾಂದಿಯಾಗಲಿ ದೀಪ
ಕೊಳಯನೆಲ್ಲ ಸುಡಲಿ ಹಚ್ಚಿದ ದೀಪದ ತಾಪ
ಕೊನೆಯಾಗಲಿ ಜಗಕೆ ಅಂಟಿರುವ ಶಾಪ
ಮನೆ-ಮನಕೆ ಚೈತನ್ಯವ ತುಂಬಲಿ ದೀಪ
ಸಾಲು ಸಾಲಿನಲಿ ಹಚ್ಚುವ ನಾವು ಪ್ರಣತಿ
ಮರೆಯುವ ಎಲ್ಲ ಕಹಿ ನೋವಿನ ಸಂಗತಿ
ನಮ್ಮಯ ಗುರಿಯಾಗಲಿ ಕೇವಲ ಪ್ರಗತಿ
ನಿರತವೂ ಗೆಲುವಾಗಲಿ ನಮ್ಮಯ ಅತಿಥಿ
ಸಾಗುವ ಕತ್ತಲೆಯಿಂದ ಬೆಳಕಿನೆಡೆಗೆ
ಹೋಗುವ ಅಜ್ಞಾನದಿಂದ ಜ್ಞಾನದೆಡೆಗೆ
ದ್ವೇಷ ರೋಷ ಮರೆತು ಪ್ರೀತಿಯೆಡೆಗೆ
ಹರುಷವಾಗಲಿ ಈ ಹಬ್ಬದ ಕೊಡುಗೆ
ದೀಪದಿಂದ ದೀಪವ ಹಚ್ಚುವ ದೀಪಾವಳಿ
ಅಂಧಕಾರವು ಸರಿದು ಜ್ಞಾನ ನೆಲೆಯಾಗಲಿ
ಜೀವನವು ಸ್ಪೂರ್ತಿಯ ಸೆಲೆಯಾಗಲಿ
ದೈವದ ಹರಕೆಯು ನಮ್ಮ ಬಲವಾಗಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ