ಬದುಕು ನಿತ್ಯ ಬವಣೆಯ ಗೂಡು
ಹೊತ್ತಿದೆ ಬಾಳಿನ ಕನಸನು ನಡು
ತಲೆಯ ಮೇಲಿಹ ಭಾರವ ನೋಡು
ಸವೆಯುತಿಹುದು ಕಾಲಿನ ಜೋಡು
ಆಸರೆಯ ಸೂರಿಗಾಗಿ ಹುಡುಕಾಟ
ಕಾಯಕವ ಹುಡುಕಿ ಅಲೆದಾಟ
ನಿತ್ಯವೂ ದೊರೆಯುವುದು ಪಾಠ
ಕೊನಯಾಗದ ಬದುಕ ಪರದಾಟ
ಕೇಳುವರಿಲ್ಲ ಒಂಟಿ ಹೆಣ್ಣಿನ ಬವಣೆ
ಹೊರಲೇ ಬೇಕು ಜೀವನದ ಹೊಣೆ
ವಿಧಿಗೆ ಇಲ್ಲವೂ ಸ್ವಲ್ಪವೂ ಕರುಣೆ
ಪ್ರತಿಷ್ಠೆ, ಹಣ ಇರುವವರಿಗಿಲ್ಲಿ ಮಣೆ
ಬವಣೆಯಲೆ ಕಳೆಯುತಿದೆ ಬಾಳು
ಜೀವನದಲಿ ತುಂಬಿಹದು ಗೋಳು
ದೀನಬಂಧು ಪರಿಹಾರವ ಹೇಳು
ದೇವನೇ ನೀನೇ ಮೊರೆಯ ಕೇಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ