ಶುಕ್ರವಾರ, ನವೆಂಬರ್ 6, 2020

ಕನ್ನಡ ಸೇವೆ



ಗೂಡು ಬಿಟ್ಟ ಹಕ್ಕಿಗಳು ನಾವು
ಗಡಿನಾಡ ಕನ್ನಡಿಗರು ನಾವು
ಕರುನಾಡು ನಮ್ಮ ತಾಯಿನಾಡು
ನಮ್ಮ ತಾಯಿನುಡಿ ಕನ್ನಡವು

ಕನ್ನಡಕೆಂದು ಚಿರಋಣಿಯು
ಗೈಯುವೆ ಸಾಹಿತ್ಯ ಸೇವೆಯನು
ಕನ್ನಡವೇ ನನ್ನುಸಿರು ನಿತ್ಯಹಸಿರು
ಕನ್ನಡ ಭಾಷೆ ಎನಗೆ ಕಾಮಧೇನು

ಲಿಪಿಗಳ ರಾಣಿ ಕನ್ನಡ ಭಾಷೆಗೆ
ಹೃದಯಾಂತರಾಳದಾ ನಮನವು
ಅಭಿಜಾತ ಭಾಷೆ ಎಂಬ ಗೌರವವು
ಕನ್ನಡ ಮಾತನಾಡುವ ಅನುದಿನವು

ಕನ್ನಡವನೇ ನುಡಿವೆ ಕೊನೆವರೆಗೆ
ಕನ್ನಡದಲೇ ನನ್ನಯ ಬರವಣಿಗೆ
ಕನ್ನಡವೇ ಭಾವದುಸಿರು ಎನಗೆ
ಕನ್ನಡಕಾಗಿ ಬದುಕು ಕೊನೆವರೆಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ