ಕವನಗಳು
ಶುಕ್ರವಾರ, ನವೆಂಬರ್ 6, 2020
ಆಧುನಿಕ ಜೀವನ
ಕೋಟಿ ರೂಪಾಯಿ ಕಾಂಕ್ರೀಟು
ಮನೆಗೆ ಒಡೆಯನು ನಾನು
ತುಂಬಿಹುದು ಬಗೆ ಬಗೆಯ
ಕಾರು, ಎಸಿ, ಸೋಫಾ, ಫ್ಯಾನು
ದುಬಾರಿ ಬೆಲೆಗೆ ಸಿಗುವುದು
ರಾಸಾಯನಿಕ ಮಿಶ್ರಿತ ನೀರು
ಗಾಳಿಯಲೂ ತುಂಬಿಹುದು
ಕಷ್ಮಲ ಶುದ್ಧವಿಲ್ಲವೂ ಚೂರು
ಆಧುನಿಕತೆಯ ಭರದಲಿ
ನಾಶವಾಗಿದೆ ಹಸಿರು
ಜನಜಂಗುಳಿಯ ನಗರ
ಕಲುಷಿತತೆಯ ತವರು
ಜೀವನವು ಆಗಿದೆ ಸರಳ
ಕವಲೊಡೆದ ದಾರಿ
ಬೆರಳ ತುದಿಯಲೇ ಬೇಕೆಲ್ಲ
ಜನರಾಗಿಹರು ಸೋಮಾರಿ
ಮನೆ ಕೆಳಗಿಳಿದರೆ
ಸಿಗುವುದು ಎಲ್ಲ
ಏನು ಮಾಡುವುದು
ನೆಮ್ಮದಿಯೇ ಇಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ