ಇದು ಬಣ್ಣದ ಬದುಕು
ಕೇವಲ ಸುಖವ ಹುಡುಕು
ಆಚರಣೆಗಳೆಲ್ಲ ಕೆಡುಕು
ಬರೀ ಥಳುಕು ಬಳುಕು
ಕಷ್ಟ ಪಡುವವರಿಲ್ಲ ಯಾರೂ
ಸುಖ ಬಯಸುವರು ಎಲ್ಲರೂ
ನಗರವ ಸೇರಿದರು ಜನರು
ಮಾನವೀಯನು ಮರೆತರು
ಹಣದ ಹಿಂದಾಯಿತು ಓಟ
ಮರೆತರು ದಿನದ ಊಟ
ಮರೆಯಿತು ಸಂಬಂಧದ ಪಾಠ
ಜೀವವಾಯಿತು ರೋಗದ ಕೂಟ
ಇದು ಬರೀ ಆಧುನಿಕ ಜೀವನ
ಅಭ್ಯಾಸಗಳೆಲ್ಲ ನವನವೀನ
ಹಳ್ಳಿಯ ಇದು ಕೇವಲ ಕಥನ
ಮೋಜು ಮಸ್ತಿ ಬದುಕ ವಿಧಾನ
ಹೆತ್ತವರಿಗಾಯಿತು ಅನಾಥಾಲಯ
ಕೇವಲ ಪದಗಳಾದವು ನಯವಿನಯ
ಇಲ್ಲದಾಯಿತು ನಂಬಿಕೆಯ ಭಯ
ಮರೆತಾಯಿತು ಕರುಣೆ, ದಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ