ಮುತ್ತಿಗಿಂತ ಹೊತ್ತು ಉತ್ತಮ
ಅರಿತರೆ ಜೀವನ ಸುಗಮ
ಕೂತು ಕಳೆಯಬೇಡ ಹೊತ್ತು
ಬರುವುದು ದೊಡ್ಡ ವಿಪತ್ತು...
ಕಳೆಯ ಸಮಯ ಬರದು
ತಿರುಗಿ ಮತ್ತೆ ಎಂದೆಂದೂ
ಹಣಕೆ ಸಿಗುವುದು ಮುತ್ತು
ಹಣಕೂ ಸಿಗದ ವಸ್ತು ಹೊತ್ತು...
ಮೂರೇ ದಿನ ಜೀವನವು
ಪ್ರತಿ ಕ್ಷಣವೂ ಅಮೂಲ್ಯವು
ಇರುವ ಸಮಯ ಬಳಸಿ
ನಡೆವ ಗುರಿಯ ಅರಸಿ...
ಸದ್ಭಳಕೆ ಮಾಡುವ ಸಮಯ
ಸಮಯ ತೋರದು ದಯ
ಹೊತ್ತಿಗಿದೆ ಅದರದೇ ಹಿರಿಮೆ
ತಿಳಿದವರಾರು ಮಹಿಮೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ