ಶುಕ್ರವಾರ, ನವೆಂಬರ್ 6, 2020

ಮಹಾ ಮಾನವತಾವಾದಿ



ಭೀಮಾಬಾಯಿ ರಾಮಜೀಯ
ಸುತನು ಈ ಭೀಮನು
ಮಹಾರಾಷ್ಟ್ರ ರತ್ನಾಗಿರಿಯಲಿ
ಇವನು ಜನಿಸಿದನು

ಅಸ್ಪೃಶ್ಯತೆ ಬಡತನದಲೇ
ಬಾಲ್ಯವನು ಕಳೆದನು
ಎಂದಿಗೂ ಮೊದಲಿಗನು
ವಿದ್ಯೆಯಲಿ ಇವನು

ಅರ್ಥಶಾಸ್ತ್ರ ನ್ಯಾಯಶಾಸ್ತ್ರದಿ
ಪದವಿಯನು ಪಡೆದರು
ವಿದೇಶದಲಿ ಕಾನೂನು
ಅಭ್ಯಾಸವನು ಮಾಡಿದರು

ಭಾರತದ ಸಂವಿಧಾನದ
ಶಿಲ್ಪಿಯು ಇವರಾದರು
ಅಸ್ಪೃಶ್ಯತೆಯ ವಿರುದ್ಧ
ಸಮರವನು ಸಾರಿದರು

ಮಹಾ ಮಾನವತಾವಾದಿ
ಪುಸ್ತಕಗಳ ಪ್ರೇಮಿಯು
ಭಾರತರತ್ನ ಪುರಸ್ಕೃತರು
ಬುದ್ಧನ ಅನುಯಾಯಿಯು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ