ಮನೋಹರಿ ನನ್ನ ಮನದನ್ನೆ
ಮುಡಿಪಾಗಿಡುವೆ ಬದುಕನ್ನೆ
ಸುರಿವೆ ಪ್ರೀತಿಯ ಧಾರಯನ್ನೆ
ಗಣದಲಿ ಸುಗುಣೆ ಸಂಪನ್ನೆ
ಮನವ ಕದ್ದ ಕೋಮಲ ಹರಿಣಿ
ನೀನೆ ನನ್ನ ಮನೆಯ ಮಹರಾಣಿ
ಆಗಿರುವೆ ಸೌಂದರ್ಯದ ಕಣಿ
ಮೃದುಭಾಷಿ ನನ್ನ ಅರಗಿಣಿ
ಭಾವ ತರಂಗದ ಗುಪ್ತಗಾಮಿನಿ
ನನ್ನ ಉಸಿರಾಗಿಹ ಮಾನಿನಿ
ನಡಿಗೆಯಲಿ ಇವಳು ಹಂಸಿನಿ
ಚತುರೆ ಸುಜ್ಞಾನದ ವಾಹಿನಿ
ಪಾಕಶಾಸ್ತ್ರದಲಿ ಪ್ರವೀಣೆಯು
ಕಲೆ ಸಾಹಿತ್ಯದಲಿ ಇಲ್ಲ ಸಾಟಿಯು
ಇವಳೇ ನಾಟ್ಯ ಮಯೂರಿಯು
ನನ್ನ ಬಾಳಿನ ಕಾವ್ಯ ಕನ್ನಿಕೆಯು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ