ಶುಕ್ರವಾರ, ನವೆಂಬರ್ 27, 2020

ಬದುಕು

ಬದುಕಲಿದೆ ಸಾಧಿಸುವ ಹಂಬಲ
ಬೇಕಾಗಿದೆ ಸತತ ಮನೋಬಲ
ಜೊತೆಯಲಿರಲಿ ಅಧಮ್ಯ ಛಲ
ಮನವಾಗದಿರಲಿ ಎಂದೂ ಚಂಚಲ

ಕಾಯಕದಿ ಇಹುದು ಕೈಲಾಸ
ದೂರವಿರಲಿ ಕಲ್ಪನಾ ವಿಲಾಸ
ಚಿಮ್ಮಲಿ ಗೆಲುವ ಮಂದಹಾಸ
ಮುಗಿಯಲಿ ಸೋಲಿನ ಅಟ್ಟಹಾಸ

ಮನಸಿದ್ದರೆ ಇದೆಯು ಮಾರ್ಗವು
ಕಷ್ಟ ಸುಖದ ನಡುವೆ ಜೀವನವು
ಒಂದೇ ನಾಣ್ಯದೆರಡು ಮುಖವು
ಗುರಿಯ ಹಿಂದೆ ಇರಲಿ ಓಟವು

ಕಠಿಣವು ಜೀವನವೆಂಬ ಸಾಗರವು
ಈಜಿದಾಗಲೇ ಸಿಗುವುದು ದಡವು
ಇರಲಿ ಸದಾ ದೇವರ ಅನುಗ್ರಹವು
ಜೊತೆಯಾಗಲಿ ವಿಧಿಯ ಬೆಂಬಲವು

ಬದುಕು ಸುಖ-ದುಃಖಗಳ ಸಮ್ಮಿಶ್ರಣ
ಅಲ್ಲವು ಕೇವಲ ಸಿಹಿಯ ಹೂರಣ
ಬದುಕಾಗಲಿ ಹಲವರಿಗೆ ಅನುಕರಣ
ಸಹ ಜೀವನವಾಗಲಿ ಅನಾವರಣ

ತೆರೆಯಲಿ ಹೊಸದಾದ ಮನ್ವಂತರ
ಬದುಕಾಗಲಿ ಸಂತಸದ ಹಂದರ
ಮನವಾಗಲಿ ಶಾಂತಿಯ ಮಂದಿರ
ಇದುವೇ ಜೀವನದ ಸಾಕ್ಷಾತ್ಕಾರ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ