ಶುಕ್ರವಾರ, ನವೆಂಬರ್ 6, 2020
ವೀರ ವನಿತೆ ಓಬವ್ವ
ಗಂಡುಮೆಟ್ಟಿದ ನಾಡು ಚಿತ್ರದುರ್ಗವು
ಅಲ್ಲಿಹ ಬಲಿಷ್ಠ ಕಲ್ಲಿನ ಕೋಟೆಯು
ವೀರ ಮದಕರಿ ನಾಯಕನು ಆಳಿದ
ಹಸಿರ ನಡುವಿನ ಉಕ್ಕಿನ ಕೋಟೆಯು
ಕೋಟೆಯ ಕಾವಲಿಗೆ ಇರುವನು
ಶೂರನಾದ ಮದ್ದ ಹನುಮಪ್ಪನು
ಇವನು ಊಟಕೆ ಮನೆಗೆ ಬಂದನು
ಇವನ ಹೆಂಡತಿಯು ಓಬವ್ವನು
ಮನೆಯಲಿ ನೀರು ಮುಗಿದಿರಲು
ಓಬವ್ವ ನೀರಿಗಾಗಿ ಹೊರಟಳು
ಆಗಲೇ ಕಳ್ಳ ಗಿಂಡಿಯಲಿ ಸೈನಿಕರು
ನುಗ್ಗುವದನು ಅವಳು ನೋಡಿದಳು
ಒನಕೆ ಹಿಡಿದು ಅಲ್ಲಿಗೆ ನಡೆದಳು
ಒನಕೆಯಲಿ ತಲೆಯ ಜಜ್ಜಿ ಒಡೆದಳು
ಹೆಣಗಳ ಎಳೆದು ಬೀಸಾಡಿದಳು
ಹೈದರನ ಸೈನ್ಯವನು ಬಗ್ಗು ಬಡಿದಳು
ಊಟ ಮುಗಿಸಿ ಬಂದ ಕಾವಲುಗಾರನು
ರಕ್ತಸಿಕ್ತ ಹೆಂಡತಿಯ ನೋಡಿ ದಂಗಾದನು
ಕೊಡಲೇ ಕಹಳೆಯನು ಊದಿದನು
ಶತ್ರುಗಳ ಮಣಿಸಿ ಗಳಿಸಿದರು ಜಯವನು
ಇತಿಹಾಸದಿ ಹೆಸರಾದಳು ಒನಕೆ ಓಬವ್ವ
ಕರ್ನಾಟಕದ ವೀರ ವನಿತೆ ಓಬವ್ವಳು
ಶೌರ್ಯಕೆ ಮನೆ ಮಾತಾದಳು ನಮ್ಮವ್ವ
ಒನಕೆ ಓಬವ್ವನ ಕಿಂಡಿಗೆ ಹಚ್ಚ ಹಸಿರಾದಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ