ಉಡುಪಿಯ ಕೋಟದ ಶಿವರಾಮ ಕಾರಂತರು
ನಡೆದಾಡುವ ವಿಶ್ವಕೋಶ ಆಗಿದ್ದರು ಇವರು
ಕಡಲ ತೀರದ ಭಾರ್ಗವ ಎಂದು ಪ್ರಸಿದ್ಧರು
ಪದ್ಮಭೂಷಣ ಪಂಪ ಪ್ರಶಸ್ತಿ ಪುರಸ್ಕೃತರು
ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ
ಪ್ರಸಿದ್ಧ ಕಾದಂಬರಿಕಾರ, ನಾಟಕಕಾರ
ವೈಜ್ಞಾನಿಕ ಲೇಖನಗಳ ಬರಹಗಾರ
ಜ್ಞಾನಪೀಠ ನಾಡೋಜದ ಪುರಸ್ಕಾರ
ಪರಿಸರ ಪ್ರೇಮಿ, ಹೋರಾಟಗಾರ ಇವರು
ಬಾಲವನದ ಕಾರಂತಜ್ಜ ಎಂದು ಪ್ರಸಿದ್ಧರು
ಸ್ವಾತಂತ್ರ್ಯ ಸಂಗ್ರಾಮದಲೂ ಇದೆ ಹೆಸರು
ವಿಶ್ವಕೋಶ ನಿಘಂಟುಗಳ ರಚನೆಕಾರರು
ಪ್ರಸಿದ್ಧ ಚೋಮನದುಡಿ, ಮೂಕಜ್ಜಿಯ ಕನಸು
ಚಲನಚಿತ್ರವಾಯ್ತು ಕಾದಂಬರಿ ಚಿಗುರಿದ ಕನಸು
ಇವರ ನಾಟಕಗಳು ಆಹಾ ಎಂತಹ ಸೊಗಸು
ಸೊರೆಗೊಂಡರು ಸಾಹಿತ್ಯ ಪ್ರೇಮಿಗಳ ಮನಸು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ